![]() |
ಒಳ್ಳೇತನನ ವೀಕ್ನೆಸ್ ಅಂದ್ಕೊಳ್ಳೋದು ಮುಠ್ಠಾಳತನ. ಒಳ್ಳೆಯವನಿಗೆ ಕೋಪ ಬರಿಸೋದು ಅದಕ್ಕಿಂತ ದೊಡ್ಡ ಮುಠ್ಠಾಳತನ -- ಇದು ಕಿಚ್ಚ ಸುದೀಪ್ ಸೂಪರ್ ಡೈಲಾಗ್. ಎಲ್ಲಿ, ಯಾವಾಗ, ಯಾಕೆ, ಯಾರಿಗೆ ಹೇಳಿದ್ದು ಅಂತೆಲ್ಲ ಯೋಚಿಸ್ಬೇಕಾಗಿಲ್ಲ. ಇದು 'ಬಚ್ಚನ್' ಖದರ್‌ನ ಒಂದು ಸ್ಯಾಂಪಲ್, ಅಷ್ಟೇ!ಮೇ 31ರ ಗುರುವಾರ ಶಶಾಂಕ್ ನಿರ್ದೇಶನದ 'ಬಚ್ಚನ್' ಟೀಸರ್ (ಪೀಠಿಕೆ ಜಾಹೀರಾತು) ಬಿಡುಗಡೆ ಮಾಡಲಾಯಿತು. ಅದರಲ್ಲಿರುವ ಕೆಲವು ಡೈಲಾಗ್‌ಗಳಿವು. 'ಬಚ್ಚನ್' ಟ್ಯಾಗ್‌ಲೈನ್‌ನಲ್ಲಿ ಬರೆದಿರುವ 'ಆಂಗ್ರಿ ಯಂಗ್ ಮ್ಯಾನ್' ಎಂಬಂತೆ ಸುದೀಪ್ ಇಲ್ಲಿ ಆಕ್ರೋಶಿತ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಚಿತ್ರದ ಕಥೆ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರೀಕರಿಸಿದಂತಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ